Sunday, 19 August 2018
ಪಿ.ಟಿ.ಎ , ಎಂ.ಪಿ.ಟಿ.ಎ ಮಹಾಸಭೆ
ದಿನಾಂಕ 5/7/2018 ರಂದು ಪಿ ಟಿ ಎ ಮಹಾಸಭೆ ನಡೆಸಲಾಯತು. ಶ್ರೀ ಮಾಣಿ ಯವರು ಅಧ್ಯಕ್ಷತೆಯನ್ನು ವಹಿಸಿದ್ದರು. ಪಂಚಾಯತು ಅಧ್ಯಕ್ಷೆ ಶ್ರೀಮತಿ ರೂಪವಾಣಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯೋಪಾಧ್ಯಾಯರಾದ ಗಂಗಾಧರ ಶೆಟ್ಟಿ ಸ್ವಾಗತಿಸಿ, ಹಿರಿಯ ಶಿಕ್ಷಕಿ ಶ್ರೀಮತಿ ವಿಜಯಶ್ರೀ ಲೆಕ್ಕ ಪತ್ರ ಮಂಡಿಸಿದರು. ಶಿಕ್ಷಕಿ ಶ್ರೀಮತಿ ಸುರೇಖ ವರದಿ ವಾಚಿಸಿದರು, ಶಿಕ್ಷಕ ಕಮಲಾಕ್ಷ ವಂದಿಸಿದರು. 2018-19 ರ ನೂತನ ಕಮಿಟಿ ರಚಿಸಲಾಯಿತು.
Saturday, 18 August 2018

ವಾಚನಾ ದಿನ
ವಾಚನಾ ದಿನ
ಸರಕಾರಿ ಅಭ್ಯುದಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಚನ ವಾರಾಚರಣೆಯ ಉದ್ಘಾಟನೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಗಂಗಾಧರ ಶೆಟ್ಟಿ ಆದೂರು ಇವರು ನೆರವೇರಿಸಿದರು. ಶಾಲಾ ವಿದ್ಯಾರ್ಥಿಗಳಿಗೆ ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಒದಗಿಸಲಾಯಿತು. ವಾರವಿಡೀ ಪುಸ್ತಕ ಪ್ರದರ್ಶನ, ಓದಿಗೆ ಸಂಬಂಧಿಸಿದ ಟಿಪ್ಪಣಿ, ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.
ಶಾಲಾ ಪ್ರವೇಶೋತ್ಸವ 2018-19
ಪ್ರೀ ಪ್ರೈಮರಿ ಉದ್ಘಾಟನೆ
ಹೊಸ ಶೈಕ್ಷಣಿಕ ವರ್ಷ2018-19ರ ಶಾಲಾ ಪ್ರವೇಶೋತ್ಸವವು ಜೂನ್ 1 ರಂದು ನಮ್ಮ ಶಾಲೆಯಲ್ಲಿ ಬಹಳ ವಿಜ್ರಂಭಣೆಯಿಂದ ಜರಗಿತು. ನವಾಗತ ಮಕ್ಕಳಿಗೆ ಪುಗ್ಗೆ ನೀಡಿ ಜೈಕಾರದೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು.ಬಳಿಕ ಅವರನ್ನು ಆದರದಿಂದ ಸ್ವಾಗತಿಸಲಾಯಿತು. ಸಭಾಕಾರ್ಯಕ್ರಮದಲ್ಲಿ ಮಕ್ಕಳಿಗೆ ಕಲಿಕೋಪಕರಣಗಳನ್ನು(ಬ್ಯಾಗ್ , ಪುಸ್ತಕ,ಸ್ಲೇಟು..ಇತ್ಯಾದಿ) ವಿತರಿಸಲಾಯಿತು.

Subscribe to:
Posts (Atom)