ABOUT US

      ಕೇರಳದ ಕಾಸರಗೋಡು ಜಿಲ್ಲೆಯ ಎಣ್ಮಕಜೆ ಗ್ರಾಮ ಪಂಚಾಯತಿನ 8 ನೇ ವಾರ್ಡಿನ ಕಜಂಪಾಡಿ ಎಂಬಲ್ಲಿ ಸರಕಾರಿ ಅಭ್ಯುದಯ ಕಿರಿಯ ಪ್ರಾಥಮಿಕ ಶಾಲೆಯು ಕಾರ್ಯವೆಸಗುತ್ತಿದೆ. ಊರ ಮಹಾನ್ ವ್ಯಕ್ತಿಗಳ ಪರಿಶ್ರಮದ ಫಲವಾಗಿ 1935 ರಲ್ಲಿ ಸ್ಥಾಪನೆಗೊಂಡಿತು. ಸಾರಿಗೆ ಸಂಪರ್ಕ ತೀರಾ ಕಡಿಮೆಯಿರುವ  ಈ ಪ್ರದೇಶದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸಕ್ಕೆ ಮಾತ್ರವೇ ಸುಧಾರಿತ ಸೌಕರ್ಯವಿದೆ. ಉಳಿದಂತೆ ಸಾಮಾಜಿಕವಾಗಿಯೂ, ಶೈಕ್ಷಣಿಕವಾಗಿಯೂ, ಆರ್ಥಿಕವಾಗಿಯೂ, ತೀರಾ ಹಿಂದುಳಿದ ಪ್ರದೇಶವಾಗಿದೆ.
       ಶಾಲಾ ಪರಿಸರವು ರಮಣೀಯ ಹಸಿರು ವನರಾಶಿಯ ಮಧ್ಯೆ  ಇದ್ದು, ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಇದೊಂದು ಹಿಂದುಳಿದ ಪ್ರದೇಶದಲ್ಲಿರುವ ಶಾಲೆಯಾದುದರಿಂದ, ಇಲ್ಲಿನ ಹೆಚ್ಚಿನ ವಿದ್ಯಾರ್ಥಿಗಳು ಪರಿಶಿಷ್ಠ ಜಾತಿ ಮತ್ತು ಪಂಗಡಕ್ಕೆ ಸೇರಿದವರಾಗಿದ್ದಾರೆ.
      ಸ್ವಾತಂತ್ರ್ಯ ಪೂರ್ವದಲ್ಲಿ ಲೇಬರ್ ಶಾಲೆಯಾಗಿ ಸ್ಥಾಪಿಸಲ್ಪಟ್ಟು, ನಂತರ ಹರಿಜನ ವೆಲ್ಫೇರ್ ಶಾಲೆಯಾಗಿ ಬದಲಾಗಿ, ತದನಂತರ ಸರಕಾರಿ ಅಭ್ಯುದಯ ಕಿರಿಯ ಪ್ರಾಥಮಿಕ ಶಾಲೆಯಾಗಿ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿರುವ ಈ ಶಾಲೆಯಲ್ಲಿ 1 ರಿಂದ 5 ರ ವರೆಗೆ ತರಗತಿಗಳಿದ್ದು, ಮಕ್ಕಳ ಸರ್ವತೋಮುಖ ಅಭಿವೃದ್ಧಿಯೊಂದೇ ಗುರಿಯಾಗಿದೆ.  

No comments:

Post a Comment