Thursday, 10 December 2015
Monday, 24 August 2015
ಬಂತು ಬಂತು ಓಣಂ ಹಬ್ಬ.....
ಕಜಂಪಾಡಿ
ಶಾಲೆಯಲ್ಲಿ ಓಣಂ ಹಬ್ಬವನ್ನು ಬಹಳ
ಸಂಭ್ರಮದಿಂದ ಆಚರಿಸಲಾಯಿತು.
20/08/2015 ಗುರುವಾರ ಓಣಂನ
ಪ್ರಯುಕ್ತ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು
ಏರ್ಪಡಿಸಲಾಗಿತ್ತು. ಮಡಕೆ
ಒಡೆಯುವುದು, ಕುಪ್ಪಿಗೆನೀರು
ತುಂಬಿಸುವುದು,ಹಗ್ಗ
ಜಗ್ಗಾಟ, ಸಂಗೀತ
ಕುರ್ಚಿ. 21ರಂದು ಪೂಕಳಂ,
ಓಣಂ ಔತಣ, ಮಹಾಬಲಿಯ
ವೇಷ ಮುಂತಾದ ಮನೋರಂಜನೆಗಳೊಂದಿಗೆ
ಹೆತ್ತವರು, ಊರವರು,
ಮಕ್ಕಳು ಮತ್ತು ಅಧ್ಯಾಪಕರು
ಸೇರಿ ಓಣಂ ಹಬ್ಬವನ್ನುಸಂಭ್ರಮದಿಂದ
ಆಚರಿಸಿದೆವು. ಈ
ಸಂದರ್ಭದಲ್ಲಿ ದೊಡ್ಡವರಿಗೆ
ಬಸ್ಟೇಂಡ್ ಬಾಂಬ್, ಸಂಗೀತ
ಕುರ್ಚಿ ಹಗ್ಗ ಜಗ್ಗಾಟ ಸ್ಪರ್ಧೆಗಳನ್ನು
ಏರ್ಪಡಿಸಲಾಗಿತ್ತು.
Tuesday, 18 August 2015
ಅಗೋಸ್ಟ 15 ಶನಿವಾರ ನಮ್ಮ ಶಾಲೆಯಲ್ಲಿ ಬಹಳ ವಿಜೃಂಭಣೆಯಿಂದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ವಿಶೇಷ ಅಸಂಬ್ಲಿಯಲ್ಲಿ ವಾರ್ಡ್ ಸದಸ್ಯರಾದ ಶ್ರೀ ರಮಾನಂದ ಎಡಮಲೆಯವರು ಧ್ವಜಾರೋಹಣಗೈದರು. ಧ್ವಜ ವಂದನೆ, ಧ್ವಜಗೀತೆ ಹಾಡಲಾಯಿತು. ಬಳಿಕ ವಿವಿಧ ಘೋಷಣೆಯೊಂದಿಗೆ ಮೆರವಣಿಗೆ ನಡೆಸಲಾಯಿತು.
ಅನಂತರ
ಸಭಾ ಹಾಗು ಸಾಂಸ್ಕೃತಿಕ ಕಾರ್ಯಕ್ರಮ
ಹಮ್ಮಿಕೊಳ್ಳಲಾಗಿತ್ತು.
ಪಿ.ಟಿ.ಎ
ಅಧ್ಯಕ್ಷೆ ಶ್ರೀಮತಿ ಸುಶೀಲ ಸಭೆಯ
ಅಧ್ಯಕ್ಷೆಯಾಗಿದ್ದರು.
ಮುಖ್ಯಅಥಿತಿಗಳಾದ
ವಾರ್ಡ್ ಸದಸ್ಯರಾದ ಶ್ರೀ ರಮಾನಂದ
ಎಡಮಲೆಯವರು ಮಕ್ಕಳ ಹಸ್ತಪತ್ರಿಕೆ
" ಏಕತೆ
'ಯನ್ನು
ಬಿಡುಗಡೆಗೊಳಿಸಿ ಮಾತನಾಡಿದರು.
ಸ್ವಾತಂತ್ರ್ಯೋತ್ಸವದ
ಅಂಗವಾಗಿ ನಡೆಸಲಾದ ಸ್ಪರ್ಧೆಗಳಲ್ಲಿ
ವಿಜೇತರಾದವರಿಗೆ ಪಿ.ಟಿ.ಎ
ಅಧ್ಯಕ್ಷೆ ಹಾಗು ಮಾತೃಸಂಘದ
ಅಧ್ಯಕ್ಷೆ ಶ್ರೀಮತಿ ಚಿತ್ರಕಲಾ
ಬಹುಮಾನ ವಿತರಿಸಿದರು.
ಮಕ್ಕಳಿಂದ
ವಿವಿಧ ದೇಶಭಕ್ತಿಗೀತೆಗಳನ್ನು
ಹಾಡಿಸಲಾಯಿತು.
ಎಲ್ಲರಿಗೂಎಲ್ಲರಿ
ಸಹಿತಿಂಡಿ ವಿತರಿಸಲಾಯಿತು.
ಶ್ರೀ
ಕಮಲಾಕ್ಷ ಮಾಸ್ಟರ್ ಎಲ್ಲರಿಗೂ
ಧನ್ಯವಾದ ಸಮರ್ಪಿಸಿದರು.
ಶ್ರೀ
ಶಿವರಾಮ ಮಾಸ್ಟರ್ ಕಾರ್ಯಕ್ರಮವನ್ನು
ನಿರೂಪಿಸಿದರು.
Wednesday, 1 July 2015
ಶಾಲಾ ರಕ್ಷಕ ಶಿಕ್ಷಕ ಸಮಿತಿ 2015-16
ನಮ್ಮ ಶಾಲೆಯ 2015-16 ರ ಶೈಕ್ಷಣಿಕ ವರ್ಷದ ರಕ್ಷಕ-ಶಿಕ್ಷಕ ಮಹಾಸಭೆಯು ತಾರೀಕು 30/06/2015 ರ ಮಂಗಳವಾರ ಬೆಳಗ್ಗೆ 10.00 ಗಂಟೆಗೆ ಜರಗಿತು. ಸಭೆಯ ಅಧ್ಯಕ್ಷ ಸ್ಥಾನವನ್ನು ಶ್ರೀ ಚಂದ್ರಶೇಖರ.ಕೆ ವಹಿಸಿದ್ದರು.
ವಾರ್ಡ್ ಸದಸ್ಯರಾದ ಶ್ರೀ ರಮಾನಂದ ಎಡಮಲೆ, ಮಾತೃಮಂಡಳಿ ಅಧ್ಯಕ್ಷೆ ಶ್ರೀಮತಿ ಚಿತ್ರಕಲಾ ಉಪಸ್ಥಿತರಿದ್ದರು.
ಎಲ್ಲಾ ಹೊಸ ಸಮಿತಿಗಳನ್ನು ರಚಿಸಲಾಯಿತು.ನೂತನ ಪಿ.ಟಿ.ಎ ಅಧ್ಯಕ್ಷೆಯಾಗಿ ಶ್ರೀಮತಿ ಸುಶೀಲ ರವರು ಆಯ್ಕೆಯಾದರು.
Subscribe to:
Posts (Atom)