Sunday, 16 November 2014
ದಿನಾಂಕ 14-11-2014 ಶುಕ್ರವಾರದಂದು 2ಗಂಟೆಗೆ ನಮ್ಮ ಶಾಲೆಯಲಿಲ್ ರಕ್ಷಕರ ಸಮ್ಮೇಳನ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು MPTA ಶ್ರೀಮತಿ ಚಿತ್ರಕಲಾ ನೆರವೇರಿಸಿದರು.ಶಾಲಾ ಮುಖ್ಯೋಪಾಧ್ಯಾಯರು ಸ್ವಾಗತಿಸಿ, ಶಿಕ್ಷಕ ಶ್ರೀ ಶಿವರಾಮ ಧನ್ಯವಾದ ಸಮರ್ಪಿಸಿದರು.ಶಿಕ್ಷಕಿ ಶ್ರೀಮತಿ ವಿಜಯಶ್ರೀ ಯವರು ತರಗತಿ ನಡೆಸಿಕೊಟ್ಟರು. ಹೆಚ್ಚಿನಸಂಖ್ಖೆಯಲ್ಲೆ ರಕ್ಷಕರು ನೆರೆದಿದ್ದರು.ಕಾರ್ಯಕ್ರಮದ ನಡುವೆ ಲಘು ಉಪಹಾರ ನೀಡಲಾಯಿತು.
Tuesday, 4 November 2014
ಸಿ. ಆರ್.ಸಿ ಕೋ ಒರ್ಡಿನೇಟರ್ ಭೇಟಿ
ತಾ 04-11-2014 ಮಂಗಳವಾರದಂದು ಸಿ.ಆರ್.ಸಿ ಕೋ ಒರ್ಡಿನೇಟರ್ ಆದ ಶ್ರೀಮತಿ ಕಾರ್ಮೆಲಿ ಟೀಚರ್ ಆಗಮಿಸಿದರು. ಒಂದನೇ ತರಗತಿ ಚಟುವಟಿಕೆಗಳಲ್ಲಿ ಭಾಗವಹಿಸಿ ಸೂಕ್ತ ಮಾರ್ಗದರ್ಶನ ನೀಡಿದರು. ಉಳಿದ ತರಗತಿಗಳಿಗೆ ಭೇಟಿ ನೀಡಿದರು. ಮಕ್ಕಳ ಬಗ್ಗೆ, ರಕ್ಷಕರ ಬಗ್ಗೆ, ಅಧ್ಯಾಪಕರೊಂದಿಗೆ ಚರ್ಚಿಸಿದರು. ಶಾಲೆಯ ವ್ಯವಸ್ಥೆಯನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.
Subscribe to:
Posts (Atom)